Kannada -

Faculty

ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗ

ಕನ್ನಡ ನಾಡಿನ ಸಾಂಸ್ಕೃತಿಕ ಸಂವರ್ಧನೆಗಾಗಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಪೂಜ್ಯ ಡಾ. ಅಪ್ಪಾಜಿಯವರ ಅಭಿಲಾಷೆಯದೊಂದಿಗೆ ಕನ್ನಡ ವಿಭಾಗವನ್ನು ಸ್ಥಾಪಿಸಲಾಗಿದೆ. ವಿಭಾಗದಲ್ಲಿ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.

ಇದುವರೆಗೆ ೭ ಬ್ಯಾಚ್‌ಗಳ ವಿದ್ಯಾರ್ಥಿಗಳು ಉತ್ತಮ ಶ್ರೇಣಿಗಳೊಂದಿಗೆ ತೇರ್ಗಡೆಯಾಗಿ ಹೊರಬಂದಿದ್ದಾರೆ. ಅವರಲ್ಲಿ ಹಲವರು ಅಧ್ಯಾಪನ ವೃತ್ತಿಯಲ್ಲಿ ತಮ್ಮ ಸ್ಥಾನವನ್ನು ಪಡೆಯುತ್ತಿದ್ದಾರೆ. ಸದ್ಯಕ್ಕೆ ೩೦ ಜನ ಸಂಶೋಧನಾರ್ಥಿಗಳು ವಿಭಾಗದಲ್ಲಿ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ನಾಲ್ಕು ಜನ ಪಿಎಚ್.ಡಿ ಪದವಿ ಪಡೆದಿದ್ದಾರೆ. ವಿಭಾಗದಲ್ಲಿ ಐದು ಜನ ಅನುಭವಿ ಸಂಶೋಧನಾ ಮಾರ್ಗದರ್ಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಭಾಗದ ಅಂಗವಾಗಿ ಪ್ರಸಾರಾಂಗವೂ ಕ್ರಿಯಾಶೀಲವಾಗಿದ್ದು, ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಸಾರದ ಉದ್ದೇಶಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದೆ.