Kannada - About Department

Faculty

About Department

ದೃಷ್ಟಿ 
Vision

  • ಕನ್ನಡ ಭಾಷೆ ಮತ್ತು ಸಾಹಿತ್ಯವು ಭಾರತೀಯ ಸನ್ನಿವೇಶದಲ್ಲಿ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಈ ಶ್ರೇಷ್ಠ ಪ್ರಾಚೀನ ಪರಂಪರೆಯ ಸಂಸ್ಕಾರ ನೀಡುವ ಉದ್ದೇಶ ಹೊಂದಲಾಗಿದೆ. 
  • ಕನ್ನಡ ಸಾಹಿತ್ಯವು ಈ ನಾಡಿನ ಭವ್ಯ ಸಂಸ್ಕೃತಿಯೊAದಿಗೆ ಸಮ್ಮಿಲನಗೊಂಡು ಬೆಳವಣಿಗೆ ಹೊಂದಿದ್ದು, ಇದನ್ನು ವಿದ್ಯಾರ್ಥಿಗಳಿಗೆ ವಿಪುಲವಾಗಿ ಧಾರೆಯರೆಯಲಾಗುವುದು. 
  • ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಮಗ್ರವಾಗಿ ಅವಲೋಕಿಸುವರು. 
  • ಕನ್ನಡ ಸಾಹಿತ್ಯದಲ್ಲಿ ಮೂಡಿಬಂದಿರುವ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿಸುವುದು. 
  • ಕನ್ನಡ ಭಾಷೆಯ ಚರಿತೆ, ಭಾಷಾವಿಜ್ಞಾನ, ದ್ರಾವಿಡ ಭಾಷಾವಿಜ್ಞಾನ, ಹಳಗನ್ನಡ ವ್ಯಾಕರಣ, ಛಂದಸ್ಸು ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ ಮುಂತಾದ ಬಹುಶಿಸ್ತೀಯ 

ಮತ್ತು ಅಂತರ್ ಶಾಸ್ತಿçÃಯ ವಿಷಯಗಳನ್ನು ಅಧ್ಯಯನ ಮಾಡುವರು. 


ಧ್ಯೇಯೋದ್ದೇಶಗಳು
Mission

  • ಸ್ಥಳೀಯ, ಪ್ರಾದೇಶಿಕ, ಭಾರತೀಯ ಮತ್ತು ಪಾಶ್ಚಾತ್ಯ ಕವಿ, ಕಾವ್ಯ, ಮಹಾಕಾವ್ಯಗಳ ತೌಲನಿಕ ಅವಲೋಕನದೊಂದಿಗೆ, ವಚನ ಸಾಹಿತ್ಯ, ಕೀರ್ತನ ಸಾಹಿತ್ಯ, ಮಹಿಳಾ ಸಾಹಿತ್ಯ, ಅಲಕ್ಷಿತ ಸಾಹಿತ್ಯ, ದಲಿತ ಸಾಹಿತ್ಯ, ಅನುಭಾವ ಸಾಹಿತ್ಯದ ವಿಭಿನ್ನ ಆಯಾಮಗಳನ್ನು ಅರಿತುಕೊಳ್ಳುವರು.  
  • ಸೃಜನಶೀಲ ಬರಹದ ಪ್ರಾಯೋಗಿಕ ತರಬೇತಿಯೊಂದಿಗೆ ಅನುವಾದದ ವಿಧಿ ವಿಧಾನಗಳನ್ನು ಕಲಿಯುವರು. ಇದರಿಂದ ಸೃಜನಶೀಲ ಬರವಣಿಗೆ, ಅನುವಾದ ಕಲೆ ಮತ್ತು ಅಂತರ್ ಭಾಷಾ ಕೌಶಲ್ಯಗಳ ಅಭಿರುಚಿ ವೃದ್ಧಿಯಾಗುವುದು. 
  • ಸಾಹಿತ್ಯಿಕ ಪಠ್ಯಗಳ ಬೋಧನೆ ಮೂಲಕ ವಿದ್ಯಾರ್ಥಿಗಳನ್ನು ಪ್ರಸ್ತುತ ಸಮಕಾಲೀನ ಬದುಕಿನ ಹಲವು ಆಯಾಮಗಳನ್ನು ಅವರಿಗೆ ಪರಿಚಯಿಸಿ, ಅವರನ್ನು ಸಂವೇದನಾಶೀಲರನ್ನಾಗಿಸುವುದು. 
  • ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಜವಾಬ್ದಾರಿ, ಕೌಟುಂಬಿಕ ನಿರ್ವಹಣೆ, ಸಾಮಾಜಿಕ ಬದ್ಧತೆ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು. 
  • ವಿದ್ಯಾರ್ಥಿ ದೆಸೆಯಲ್ಲಿ ಯುವಕರಿಗೆ ಮುಂದಾಳತ್ವದ ಬಗ್ಗೆ ತರಬೇತಿ ನೀಡಿ ನಾಯಕತ್ವದ ಗುಣಗಳನ್ನು ಬೆಳೆಸಿ ಪೋಷಿಸುವುದು.